ತಾಯಿ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ – ೨೦೨೫
ತಾಯಿ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ
ಹಾಸನ ಜಿಲ್ಲೆಯ ಪ್ರವಾಸೊಧ್ಯಮ ಟೂರ್ ಪ್ಯಾಕೇಜ್ ಮತ್ತು ಆಗಸದಿಂದ ಹಾಸನ ಹೆಲಿರೈಡ್ ಅವಕಾಶ
- ೨೦೨೫ ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತಾದಿಗಳು ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಹಿನ್ನಲೆಯಲ್ಲಿ ದೇವಿಯ ಸ್ಥಳ ಪುರಾಣದ ಇತಿಹಾಸವಾಗಿ ಭಕ್ತಾದಿಗಳಿಗೆ ಸಪ್ತ ಮಾತೃಕೆಯರ ದರ್ಶನಾವಕಾಶ ಮಾಡಿಕೊಡಲು ಟೂರ್ ಪ್ಯಾಕೇಜ್ ಕೈಗೊಂಡಿದೆ.
- ಹಾಸನ ಜಿಲ್ಲೆಯು ವಾಸ್ತು ಶಿಲ್ಪಕಲೆಗಳೊಂದಿಗೆ ವಿಶ್ವವಿಖ್ಯಾತ ಪ್ರವಾಸಿ ಸ್ಥಳಗಳನ್ನೊಳಗೊಂಡಿರುವುದರಿಂದ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಪ್ರವಾಸಾವಕಾಶ ಒದಗಿಸಲು ಈ ಟೂರ್ ಪ್ಯಾಕೇಜ್ ಕೈಗೊಂಡಿದೆ.
- ಒಂದನೇ ಟೂರ್ ಪ್ಯಾಕೇಜ್ನಲ್ಲಿ ತಾಯಿ ಹಾಸನಾಂಬ ದೇವಿಯ ರೂ. ೧೦೦೦/- ಸರತಿ ಸಾಲಿನ ದರ್ಶನ ಸೇರಿದಂತೆ ಹಾಸನ-ಆಲೂರು ಮಾರ್ಗವಾಗಿ ಎ) ವಯಸ್ಕರರಿಗೆ ರೂ. ೧೪೦೦/-, ಮಕ್ಕಳಿಗೆ ರೂ. ೧೩೦೦/-
- ಎರಡನೇ ಟೂರ್ ಪ್ಯಾಕೇಜ್ನಲ್ಲಿ ತಾಯಿ ಹಾಸನಾಂಬ ದೇವಿಯ ರೂ. ೧೦೦೦/- ಸರತಿ ಸಾಲಿನ ದರ್ಶನ ಸೇರಿದಂತೆ ಬೆಂಗಳೂರು-ಹಾಸನ-ಬೆಂಗಳೂರು ಮಾರ್ಗವಾಗಿ ಎ) ವಯಸ್ಕರರಿಗೆ ರೂ. ೨೫೦೦/-, ಮಕ್ಕಳಿಗೆ ರೂ. ೨೨೦೦/- ಮತ್ತು ಬಿ) ವಯಸ್ಕರರಿಗೆ ರೂ. ೨೦೦೦/-, ಮಕ್ಕಳಿಗೆ ರೂ. ೧೯೦೦/- ರಂತೆ ೨ ಟೂರ್ ಪ್ಯಾಕೇಜ್ಗಳು.
- ಮೂರನೇ ಟೂರ್ ಪ್ಯಾಕೇಜ್ನಲ್ಲಿ ತಾಯಿ ಹಾಸನಾಂಬ ದೇವಿಯ ರೂ. ೧೦೦೦/- ಸರತಿ ಸಾಲಿನ ದರ್ಶನ ಸೇರಿದಂತೆ ಮೈಸೂರು-ಹಾಸನ-ಮೈಸೂರು ಮಾರ್ಗವಾಗಿ ಎ) ವಯಸ್ಕರರಿಗೆ ರೂ. ೨೦೦೦/-, ಮಕ್ಕಳಿಗೆ ರೂ. ೧೮೦೦/- ಮತ್ತು ಬಿ) ವಯಸ್ಕರರಿಗೆ ರೂ. ೧೬೦೦/-, ಮಕ್ಕಳಿಗೆ ರೂ. ೧೫೦೦/- ರಂತೆ ೨ ಟೂರ್ ಪ್ಯಾಕೇಜ್ಗಳು.
- ನಾಲ್ಕನೇ ಟೂರ್ ಪ್ಯಾಕೇಜ್ನಲ್ಲಿ ಸಕಲೇಶಪುರ-ಹಾನುಬಾಳು ಮಾರ್ಗವಾಗಿ ವಯಸ್ಕರರಿಗೆ ರೂ. ೫೦೦/-, ಮಕ್ಕಳಿಗೆ ರೂ. ೪೦೦/-
- ಐದನೇ ಟೂರ್ ಪ್ಯಾಕೇಜ್ನಲ್ಲಿ ಸಕಲೇಶಪುರ-ಬಿಸಲೆಘಾಟ್ ಮಾರ್ಗವಾಗಿ ವಯಸ್ಕರರಿಗೆ ರೂ. ೫೨೫/-, ಮಕ್ಕಳಿಗೆ ರೂ. ೪೨೫/-
- ಆರನೇ ಟೂರ್ ಪ್ಯಾಕೇಜ್ನಲ್ಲಿ ಬೇಲೂರು-ಹಳೇಬೀಡು ಮಾರ್ಗವಾಗಿ ವಯಸ್ಕರರಿಗೆ ರೂ. ೩೭೫/-, ಮಕ್ಕಳಿಗೆ ರೂ. ೨೭೫/-
- ಏಳನೇ ಟೂರ್ ಪ್ಯಾಕೇಜ್ನಲ್ಲಿ ಶ್ರವಣಬೆಳಗೊಳ ಮಾರ್ಗವಾಗಿ ವಯಸ್ಕರರಿಗೆ ರೂ. ೪೦೦/-, ಮಕ್ಕಳಿಗೆ ರೂ. ೩೦೦/-
- ಎಂಟನೇ ಟೂರ್ ಪ್ಯಾಕೇಜ್ನಲ್ಲಿ ಅರಸೀಕೆರೆ ಮಾರ್ಗವಾಗಿ ವಯಸ್ಕರರಿಗೆ ರೂ. ೪೦೦/-, ಮಕ್ಕಳಿಗೆ ರೂ. ೩೦೦/-
- ಒಂಬತ್ತನೇ ಟೂರ್ ಪ್ಯಾಕೇಜ್ನಲ್ಲಿ ಅರಕಲಗೂಡು ಮಾರ್ಗವಾಗಿ ವಯಸ್ಕರರಿಗೆ ರೂ. ೪೦೦/-, ಮಕ್ಕಳಿಗೆ ರೂ. ೩೦೦/-
- ಹತ್ತನೇ ಟೂರ್ ಪ್ಯಾಕೇಜ್ನಲ್ಲಿ ಜಾವಗಲ್-ಬಾಣಾವರ ಮಾರ್ಗವಾಗಿ ವಯಸ್ಕರರಿಗೆ ರೂ. ೫೦೦/-, ಮಕ್ಕಳಿಗೆ ರೂ. ೪೦೦/-
- ಹನ್ನೊಂದನೇ ಕೆಎಸ್ಟಿಡಿಸಿ ಬೆಂಗಳೂರು ವತಿಯಿಂದ ಟೂರ್ ಪ್ಯಾಕೇಜ್ಗಳು: ತಾಯಿ ಹಾಸನಾಂಬ ದೇವಿಯ ರೂ. ೧೦೦೦/- ಸರತಿ ಸಾಲಿನ ದರ್ಶನ ಸೇರಿದಂತೆ ೧) ಬೆಂಗಳೂರು-ಹಾಸನ ಮಾರ್ಗವಾಗಿ ರೂ. ೨೦೧೬/- ೨) ಮೈಸೂರು-ಹಾಸನ ಮಾರ್ಗವಾಗಿ ರೂ. ೨೧೫೦/-
- ಮೇಲಿನ ಹನ್ನೊಂದು ಟೂರ್ ಪ್ಯಾಕೇಜ್ಗಳಲ್ಲಿ ಹಾಸನ ಜಿಲ್ಲೆಯ ಆಯಾ ಮಾರ್ಗಗಳಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ತಾಯಿ ಹಾಸನಾಂಬ ದೇವಿಯ ಭಕ್ತಾದಿಗಳಿಗೆ ವಿಶೇಷ ಪ್ರವಾಸಾವಕಾಶ ಕಲ್ಪಿಸಿದೆ.
- ಆನ್ಲೈನ್ ವೆಬ್ಸೈಟ್ ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಬಹುದಾಗಿದೆ ವೆಬ್ಸೈಟ್ ವಿಳಾಸ: www.ksrtc.in ಮತ್ತು www.kstdc.co
- ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್ ಟಿಕೇಟ್ಗಳನ್ನು ಹಾಸನ ನಗರದ ಹೊಸ ಮತ್ತು ಹಳೇ ಬಸ್ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ.