ಕನ್ನಡ /
English

ಭೇಟಿ ನೀಡಿದವರು: 0

ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ

ಜಿಲ್ಲಾಡಳಿತ, ಹಾಸನ

ತಾಯಿ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ

ಜಾತ್ರಾ ಮಹೋತ್ಸವ - 2025

ಜಾತ್ರಾ ಮಹೋತ್ಸವ - 2025

ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ
ಜಿಲ್ಲಾಡಳಿತ, ಹಾಸನ
ತಾಯಿ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ – ೨೦೨೫
ತಾಯಿ ಹಾಸನಾಂಬ ದೇವಿ ದರ್ಶನ ದಿನಗಳಲ್ಲಿ ವಾಹನ ನಿಲುಗಡೆ ನಿಯಮಗಳು
  1. ೨೦೨೫ ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ೨೫ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
  2. ಹಾಸನ ನಗರಕ್ಕೆ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಮತ್ತು ಅವರ ವಾಹನಗಳ ಸುರಕ್ಷತೆ ದೃಷ್ಟಿಯಲ್ಲಿ ನಗರದಾದ್ಯಂತ ಯಾವುದೇ ವಾಹನದಟ್ಟಣೆಯಾಗದಂತೆ ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕಟ್ಟುನಿಟ್ಟಿನ ನಿರ್ಬಂಧವಿದ್ದು ಉಲ್ಲಂಘನೆಗೆ ದಂಡ ವಿಧಿಸಲಾಗುವುದು.
  3. ಹಾಸನ ನಗರದ ಹಾಸನಾಂಬ ದೇವಸ್ಥಾನ ಆವರಣ ಮತ್ತು ಸಂತೆಪೇಟೆ ವೃತ್ತಕ್ಕೆ ನೇರವಾಗಿ ಭಕ್ತಾದಿಗಳು ವಾಹನಗಳ ಮೂಲಕ ಆಗಮಿಸಲು ಸಂಚಾರ ನಿರ್ಬಂದವಿರುತ್ತದೆ.
  4. ಹಾಸನ ನಗರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆಯಾ ಹೆದ್ದಾರಿ ರಸ್ತೆ ಮಾರ್ಗಗಳಿಗೆ ಸೂಕ್ತವಾಗುವಂತೆ ಪಾರ್ಕಿಂಗ್ ಸ್ಥಳಗಳನ್ನು ನಿಗಧಿಪಡಿಸಲಾಗಿದೆ.
  5. ಪಾರ್ಕಿಂಗ್ ಸ್ಥಳಗಳಿಗೆ ಸುಲಲಿತವಾಗಿ ತಲುಪಲು ಆಯಾ ಪಾರ್ಕಿಂಗ್ ಸ್ಥಳಗಳ ಗೂಗಲ್ ಲೋಕೇಷನ್ ಪಾಯಿಂಟ್ ಮ್ಯಾಪ್ಗಳನ್ನು ನೀಡಿದೆ.
  6. ಪಾರ್ಕಿಂಗ್ ವ್ಯವಸ್ಥೆಯನ್ನು ಈ ಮುಂದಿನ ಸ್ಥಳಗಳಲ್ಲಿ ನಿಗದಿಪಡಿಸಲಾಗಿರುತ್ತದೆ. ಹಾಸನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಎ) ಕೆಹೆಚ್ಬಿ ಲೇಔಟ್, ಚನ್ನಪಟ್ಟಣ, ಅರಕಲಗೂಡು-ಗೊರೂರು ಮಾರ್ಗಕ್ಕೆ ಹೊಂದಿಕೊಂಡಿರುವಂತೆ ಬಿ) ಬಿಟ್ಟಗೋಡನಹಳ್ಳಿ ಸ್ಮಶಾನದ ಬಳಿ ಖಾಲಿ ಜಾಗ, ಅರಕಲಗೂಡು-ಗೊರೂರು ಸಂತೇಪೇಟೆ ತಲುಪುವ ಮುಂಚೆ ಸಿ) ದನಗಳ ಸಂತೆ ಮೈದಾನ ಮತ್ತು ಡಿ) ಸಂತೆಮೈದಾನ
  7. ಪಾರ್ಕಿಂಗ್ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂಧಿಗಳೊಂದಿಗೆ ಸಮನ್ವಯತೆ ಸಾಧಿಸಿ ಆಯಾ ಸ್ಥಳಗಳಲ್ಲಿ ಕಲ್ಪಿಸಿರುವ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಭಕ್ತಾದಿಗಳಲ್ಲಿ ವಿನಂತಿಸಿದೆ.
ತಾಯಿ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಎಲ್ಲಾ ನಿಯಮಗಳನ್ನು ಪಾಲಿಸಿ-ಸಹಕರಿಸಿ, ದೇವರ ಕೃಪೆಗೆ ಪಾತ್ರರಾಗಲು ಕೋರಿದೆ.

ಪಾರ್ಕಿಂಗ್ ಸ್ಥಳಗಳು | Parking Locations

ಪಾರ್ಕಿಂಗ್ 1

ಹಾಸನ ಗೋರೂರು ರೋಡ್ (ಕರ್ತವ್ಯ ನಿರತ ವಾಹನಗಳಿಗಾಗಿ )

ಪಾರ್ಕಿಂಗ್ 2

ಸಂತೆ ಪೇಟೆ, ಹಳೆಯ ಎಪಿಎಂಸಿ

ಪಾರ್ಕಿಂಗ್ 3

ಬಸ್ ಪಾರ್ಕಿಂಗ್ ಪ್ರದೇಶ

ಪಾರ್ಕಿಂಗ್ 4

ಸ್ಮಶಾನದ ಪಕ್ಕದಲ್ಲಿ

ಪಾರ್ಕಿಂಗ್ 5

ಕೆಎಚ್‌ಬಿ ಮೈದಾನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ

ಪಾರ್ಕಿಂಗ್ 6

ಕೆ ಎಸ್ ಆರ್ ಟಿ ಸಿ‌ ನಿಲ್ದಾಣ ಎದುರು

ಪಾರ್ಕಿಂಗ್ 7

ಚನ್ನಪಟ್ಟಣ ಕೆರೆ ಅಂಗಳದ ಹತ್ತಿರ

ಪಾರ್ಕಿಂಗ್ 8

ತ್ಯಾಜ್ಯ ನಿರ್ವಹಣೆ ಮೈದಾನ