Temple History
ದೇಗುಲದ ಸ್ಥಳ ಇತಿಹಾಸ
ಆಡಳಿತ ವಿಭಾಗ
ಹಾಸನಾಂಬೆಯ ನೆಲೆ-ಹಿನ್ನೆಲೆ : ಪ್ರಕೃತಿಯ ವರ ಪಡೆದು, ಸಂಸ್ಕೃತಿಯ ಸಾರವುಂಡು, ಧೀರೋದಾತ್ತ ಗುಣವನ್ನು ಮರೆಸಿ, ಸರ್ವಾನುಮತ ಸಮನ್ವಯ ತತ್ವವನ್ನು ಅನುಷ್ಠಾನದಲ್ಲಿ ತಂದುಕೊಂಡು ನಾಡಿಗೆ ಮಾದರಿಯಾದ ಚಕ್ರಾಧಿಪತ್ಯವನ್ನು ಭರಿಸಿ ಮೆರೆದ ಪುಣ್ಯ ಭೂಮಿ ಹಾಸನ ಜಿಲ್ಲೆ, ಈ ಹಾಸನ ಜಿಲ್ಲೆಯ ಆಡಳಿತದ ಕೇಂದ್ರ ಹಾಸನ ನಗರ. ಈ ಹಾಸನದ ಅಭಿಮಾನದ ಅನುಪಮ ಪ್ರಭಾವದ ಶಕ್ತಿದೇವತೆ, ಗ್ರಾಮದೇವತೆ ಶ್ರೀ ಹಾಸನಾಂಬೆ, ಈಕೆಯನ್ನು ಹಾಸನಮ್ಮ, ಹಾಸನದಮ್ಮ, ಸಪ್ತಮಾತೃಕೆಯರೆಂದು ಅನನ್ಯ ಭಕ್ತಿಯಿಂದ ಆರಾಧಿಸುವುದು ಪರಿಪಾಠವಾಗಿದೆ.
ಅಮ್ಮ ಎನ್ನುವ ಮಾತು ಮನುಷ್ಯನ ಬಾಯಿಂದ ಮೊದಲು ಬಂದ ಮಾತು. ಅದಕ್ಕಾಗಿ ಮಾತೃಹದೇವೋಭವ ಎಂದರು ನಮ್ಮ ಹಿರಿಯರು. ಮೈದಳೆಯುವ ಕಾಲದಲ್ಲಿ ಈ ಅಮ್ಮನ ಎರಡೂ ಮುಖಗಳಿಗೆ ರೂಪ ಸಿದ್ಧವಾಯಿತು. ಹಲವಾರು ವಿವರಗಳನ್ನು ಸೂಚಿಸುವಂತೆ ಹತ್ತಾರು ಕೈಗಳು, ಕಪಾಲ, ಶೂಲ, ಖಡ್ಗ, ಅಂಕುಶಗಳು ಬಂದವು. ವರದ ಅಭಯ ಪುಷ್ಪ, ಅನ್ನ ಪಾತ್ರೆಗಳೂ ಬಂದವು.